ಅವತ್ತು ಎಲ್ಲರೂ ಸೇರಿ ನಾಟಕ ಆಡೋಣ ಅಂತ ತೀರ್ಮಾನಿಸಿದ್ದರು. ಹಾಗಂತ ವೇಷಭೂಷಣಗಳೇನೂ ಇಲ್ಲ. ಯಾವ ಪ್ರಾಕ್ಟೀಸೂ ಇಲ್ಲ. ನಂಗೆ ದ್ರೌಪದಿ ಪಾತ್ರ ಎಂದರು. ಸರಿ ಇನ್ನು ಐದು ಹುಡುಗರು ನನ್ನ ಗಂಡಂದಿರಾಗಿ ಎಲ್ಲರೆದುರು ನನ್ನ ಮರ್ಯಾದೆ ತೆಗೀತಾರೆ ಅಂದುಕೊಂಡಿದ್ದೆ. ಆದರೆ ಆದದ್ದೇ ಬೇರೆ. ನಂಗೂ ಕಥೆ ಸರಿಯಾಗಿ ಗೊತ್ತಿಲ್ಲ. ನಂಗೆ ತುಂಡು ಸೀರೆ ಕೊಟ್ಟು ಇದನ್ನು ಮಾತ್ರ ಉಟ್ಕೋ, ಇನ್ನೇನೂ ಬೇಡ ಅಂದ್ರು. ನಂಗೋ ಸೀರೇನೇ ಉಡೋಕೆ ಬರಲ್ಲ. ಹೇಗೋ ಗೆಳತಿಯರ ಸಹಾಯದಿಂದ ಅದರಲ್ಲೇ ಮೈ ಮುಚ್ಚಿಕೊಂಡಿದ್ದಾಯಿತು….