ನನ್ನ ಕಾಲೇಜಿರೋದು ಮೈಸೂರು ಬ್ಯಾಂಕ್ ಸರ್ಕಲ್ ನ ಹತ್ತಿರ. ಅದರ ಸುತ್ತ ತುಂಬಾ ಕಾಲೇಜಿದೆ ಅಂತ ನೀವು ಹೇಳಿದರೆ ಅದು ಸರಿ, ಆದರೆ ನನ್ನ ಕಾಲೇಜು ಯಾವುದು ಅಂತ ಹೇಳೋಕೆ ನನಗಿಷ್ಟವಿದ್ದರೂ ಹೇಳೋಕೆ ಸಾದ್ಯವಿಲ್ಲ. ಕೆಲವೊಂದು ವಿಶಯಾನ ಹೇಳೋದಕ್ಕಿಂತ ಹೇಳೋದಿರೋದೇ ವಾಸಿ. ಅದ್ರಲ್ಲೂ ಕಥೆಗೆ ಅದರ ಅವಶ್ಯಕತೆ ಇಲ್ಲದಿದ್ದರೆ ಇನ್ನೂ ಮೇಲು. ಈಗ ಆ ಕಾಲೇಜಿಲ್ಲ, ಒಡೆದು ಹಾಕಿದ್ದಾರೆ ಅಂತ ನನ್ನ ಸ್ನೇಹಿತ ಮೇಲ್ ಕಳಿಸಿದ್ದ. ಅದು ಸತ್ಯಾನೋ ಸುಳ್ಳೋ ಗೊತ್ತಿಲ್ಲ. ನಾನು ಬೆಂಗಳೂರಿಗೆ ಬಂದು ತುಂಬಾ…